ನಕ್ಷತ್ರಗಳ ಸುಟ್ಟ ನಾಡಿನಲ್ಲಿ

Waris Dirie ಬರ್ದಿರೋ ಅದ್ಭುತ ಪುಸ್ತಕ Desert Flower ಪುಸ್ತಕ ಓದಿ ತಲೆಗೆ ಹುಳ ಬಿಟ್ಕೊಂಡಂಗೆ ಆಗಿತ್ತು. ಸರಿ, ಯಾವ್ದಾದ್ರೂ light reading ತಗೊಳೋಣ ಅಂತ cupboard ತೆಗ್ದ್ರೆ full confusion. ಕಾರಂತ್ರು, ಬೇಂದ್ರೆ, ಜಡಭರತ… ಇದ್ನ ನೋಡ್ತಾ ಇದ್ರೆ ನಾನಿವತ್ತು ಓದೋಕೆ start ಮಾಡಿದಂಗೆ ಅನ್ಕೊಂಡು table ಮೇಲೆ ಇಟ್ಟಿರೋ ಪುಸ್ತಕಗಳನ್ನ ನೋಡಿದೆ. ಅಲ್ಲಿ ಇತ್ತೀಚಿಗೆ ತಗೊಂಡಿದ್ ಭಾರತಿ ಮೇಡಂ ಅವ್ರ “ನಕ್ಷತ್ರಗಳ ಸುಟ್ಟ ನಾಡಿನಲ್ಲಿ” ಇತ್ತು.

But ನನ್ಗೆ ಪ್ರವಾಸ ಕಥನ ಅಂದ್ರೆ ಅಷ್ಟಕ್ಕಷ್ಟೇ. In fact, ನಾನು ಒಂದೆರ್ಡ್ ಪುಸ್ತಕ ಓದೋಕೆ start ಮಾಡಿ ನಿಲ್ಸಿದೀನಿ ಕೂಡ. ಆದ್ರೂ ಸಂಧ್ಯಾ ಮೇಡಂ ಎಲ್ಲಾ ಹೋಗಿದ್ trip ತಾನೇ, photos ಅಂತೂ ಖತರ್ನಾಕ್ ಇತ್ತು, ಜೊತೆಗೆ ಯಾವ್ದೋ ಪಾಳು ಬಿದ್ದಿರೋ open air auditorium ಬಗ್ಗೆ ಕೂಡ Facebookನಲ್ಲಿ ಪೋಸ್ಟ್ ಹಾಕಿದ್ರು, ಅದೂ ಇಷ್ಟ ಆಗಿತ್ತು. So ಈಗ ಅದ್ರ ಬಗ್ಗೆನೇ ಪುಸ್ತಕ ಅಂದ್ರೆ ಇನ್ನೂ ಹೆಚ್ಚಿನ ಮಾಹಿತಿ ಇರುತ್ತೆ, ಏನಿಲ್ಲ ಅಂದ್ರೂ ಅದಾದ್ರೂ ಓದ್ಬೌದು ಅಂತೆಲ್ಲ ಲೆಕ್ಕ ಹಾಕಿ ಕೈಗೆ ತಗೊಂಡೆ. Ironically, ಈ ಪುಸ್ತಕ ನಾನು 20 page ಕೂಡ ಓದದೇ ಬಿಟ್ಟಿದ್ದ್ ಎ.ಕೆ.ರಾಮಾನುಜನ್ ಆಯ್ದ ಪ್ರಬಂಧಗಳು ಪುಸ್ತಕದ್ಮೇಲೆ ಇತ್ತು. Worst case, ಈ ಪುಸ್ತಕಕ್ಕೂ ಅದೇ ಗತಿ ಬರುತ್ತೆ ಅನ್ಕೊಂಡು ಶುರು ಅಂತೂ ಮಾಡಿದೆ.

Startingನಲ್ಲೇ shock

ಜಿ. ಎನ್. ಮೋಹನ್ ಅವ್ರ “ಮುನ್ನುಡಿ”, ನಂತರ ಭಾರತಿ ಮೇಡಂ ಅವ್ರ intro ಓದಿ ಮೊದಲ್ನೇ ಅಧ್ಯಾಯಕ್ಕೆ ಬಂದಾಗ್ಲೇ ಇದು friends trip ಅಲ್ಲ, family trip ಅಂತ ಗೊತ್ತಾಗಿದ್ದು.

ನಾನು ಮೊದ್ಲೇ I, Me, Myself trip ಮನ್ಶ, ಏನೋ friends ಜೊತೆ ಅಂದ್ರೂ ಓಕೆ ಓಕೆ, ಸಹಿಸ್ಕೊಬೌದು. ಇದು family tripಪ್ಪಾ, ಪಕ್ಕಾ TV ಸೀರಿಯಲ್ ಥರ ಇರುತ್ತೇನೋ ಅನ್ಸಿದ್ರೂ ಓದು ಮುಂದ್ವರಿಸಿದ್ದೆ. ಇವ್ರೆಲ್ಲ ಮಾಡಿದ್ planning, ಹೊರ್ಡೊವಾಗ ಆಗಿದ್ ಅವಾಂತರಗಳ ಬಗ್ಗೆ ಮಜಾ ತಗೋಂತಾ ಇದ್ದಂಗೆ ಇವ್ರು Poland ತಲ್ಪಿದ್ರು.

ಇನ್ನೆಷ್ಟ್ page ಇದೆ?

ಆಗ ಮೊದ್ಲು ನೋಡಿದ್ದು ಇನ್ನೂ ಎಷ್ಟ್ page ಬಾಕಿ ಇದೆ ಅಂತ.

ಓಕೆ, 200 pages ಇದೆ ಅಂದ್ರೆ ನೋಡಿರೋ ಜಾಗಗಳ ಬಗ್ಗೆ, ಅಲ್ಲಿನ culture, ಊಟ, transportation facilities, ಜನ್ರು, ಇಂಥವುಗಳ ಬಗ್ಗೆ interesting ವಿಷ್ಯಗಳನ್ನ ಬರ್ದಿರ್ತಾರೆ, ನೋಡೋಣ ಅನ್ಕೊಂಡು continue ಮಾಡಿದೆ.

ಇಷ್ಟು ಹೇಳಲೇಬೇಕಿತ್ತು

ಈ chapter ಇಡೀ ಪುಸ್ತಕದ turning point.

ಅಲ್ಲಿವರ್ಗೂ lockdownನಲ್ಲಿ Sunday evening modeನಲ್ಲೇ ಹೋಗ್ತಿದ್ದ content, ಇಲ್ಲಿಂದ Monday morning ಥರ I-mean-business mode ಸೇರ್ತು. ಭಾರತಿ ಮೇಡಂ ಈ ಪ್ರಯಾಣಕ್ಕೆ ಎಷ್ಟ್ ತಯಾರಿ ಮಾಡ್ಕೊಂಡಿದ್ರು, ಹಾಗೇ ಬಹುಷಃ ಅಲ್ಲಿಂದ ಬಂದ್ಮೇಲೂ ಎಷ್ಟೆಲ್ಲಾ ಮಾಹಿತಿ refer/ validate ಮಾಡಿದ್ರು, ಅನ್ನೋದು ಮುಂದಿನ 150 pages ಹೇಳುತ್ತೆ.

ಹಿಟ್ಲರ್ ಅಥವಾ Nazis ಅಂದಾಗ ನಮ್ಮ ತಲೆಗೆ ಬರೋ concentration camps, torture rooms, ಅಲ್ದೇ ಇವ್ರು ನೋಡಿದ ಪ್ರತಿಯೊಂದು ವಸ್ತು ಬಗ್ಗೆ ಹೇಳೋವಾಗ್ಲೂ ಆಗಿನ ಕರಾಳ ದಿನಗಳನ್ನ ಮೆಲುಕು ಹಾಕ್ತಾ ಹೋಗ್ತಾರೆ. ಹಾಗೆ ಅಂತ ಇಲ್ಲಿ ಇತಿಹಾಸದ ಪಾಠ ಮಾಡಿಲ್ಲ. ಸಾಮಾನ್ಯ ಓದುಗರಿಗೆ bore ಆಗ್ದೇ ಇರೋಥರ, but ವಿಷಯದ seriousness and importanceನ dilute ಮಾಡದೆ ಅಲ್ಲಲ್ಲಿ ನಮ್ಮ/ ಅಲ್ಲಿನ ಈಗಿನ ಪರಿಸ್ಥಿತಿಗಳ ಜೊತೆ compare ಮಾಡ್ತಾ, ಕೆಲವು lighthearted moments ಸೇರಿಸ್ತಾ ಹೋಗಿದ್ದು ನಂಗೆ ಇಷ್ಟ ಆಯ್ತು. ಆದ್ರೆ narrativeನಲ್ಲಿ ಅಲ್ಲಿನ ಘಟನೆಗಳ seriousness and importanceನ dilute ಮಾಡಿಲ್ಲ.

ನಾನು ಹಿಟ್ಲರ್, nazis, world war ಬಗ್ಗೆ 3-4 ಸಿನೆಮಾಗಳನ್ನ, documentariesನ ನೋಡಿದ್ರೂ ಈ ಪುಸ್ತಕ ಓದೋವಾಗ ಆದ ಅನುಭವ ಬೇರೆ. ಅದ್ಕೆ mostly ಎರ್ಡು ಕಾರಣ ಅನ್ಸುತ್ತೆ. ಒಂದು, ನಮ್ಮವ್ರೆ, ನನಗೆ ಹತ್ತಿರವಾದ ಭಾಷೇಲಿ ಬರ್ದಿರೋದು. ಇನ್ನೊಂದು ಮುಖ್ಯವಾದ್ದು, movie ನೋಡೋವಾಗ director/ cameraperson ಏನು ತೋರ್ಸ್ತಾರೋ ಅದ್ನ ನೋಡ್ತೀವಿ, ಅದೇ ಚಿತ್ರ ನಮ್ಮ ಮನ್ಸಲ್ಲೂ ಉಳ್ಕೊಂಡ್ಬಿಡುತ್ತೆ. ಆದ್ರೆ ಪುಸ್ತಕ ಓದೋವಾಗ ಆ ಒಂದು “ಹೇರಿಕೆ” ಇರಲ್ಲ. ಪ್ರತಿಯೊಂದು ಸನ್ನಿವೇಶಾನೂ ನಮ್ಮ ಮನ್ಸಿಗೆ ಏನು ಬರುತ್ತೋ, ಅದ್ನ imagine/ visualize ಮಾಡ್ಕೋತೀವಿ. ಬಹುಷಃ ಇಲ್ಲಿ ಬರ್ದಿರೋ ವಿಷಯಗಳನ್ನೇ ಒಂದು movieನಲ್ಲಿ ನೋಡಿದ್ರೆ ನಂಗೆ ಈ ಮಟ್ಟಿಗೆ connect ಆಗ್ತಿರ್ಲಿಲ್ಲ. In fact, ಇದು ಯಾವ ಮಟ್ಟದಲ್ಲಿ ನನ್ನ ಕಾಡ್ತು ಅಂದ್ರೆ, startingನಲ್ಲಿ ಆರಾಮಾಗಿ ಓದ್ಕೊಂಡೊಗ್ಬೌದು ಅನ್ಕೊಂಡಿದ್ ನಾನು, ಮುಂದೆ ಬಂದ ಘಟನೆಗಳ ವರ್ಣನೆ, ಅವನ್ನ ನಾನು visualize ಮಾಡ್ಕೊಂಡಿದ್ದನ್ನ ಜೀರ್ಣಿಸ್ಕೊಳೋಕೆ forced breaks ತಗೊಂಡು ಬೇರೆ ಕೆಲ್ಸಗಳನ್ನ ಮಾಡಿದೆ.

Socioeconomically disadvantaged ಜನ್ರ ಬಗ್ಗೆ ಓದೋವಾಗ ನಾನು lucky ಅಂತ ತುಂಬಾ ಸರಿ ಅನ್ಸಿದೆ. ಆದ್ರೆ ಒಂದು ಯುದ್ಧದ ಪರಿಸ್ಥಿತಿ, ಅದೂ ಹಿಟ್ಲರ್ ಇಂದ, ಜರ್ಮನ್ಸ್ ಇಂದ Jews ಅನುಭವಿಸಿದ ಕಷ್ಟಗಳನ್ನ ಊಹಿಸ್ಕೊಂಡಾಗ ನಾನು ಪ್ರತಿ ಕ್ಷಣ ಸಾವಿನ ಬಗ್ಗೆ ಯೋಚ್ನೆ ಮಾಡೋಷ್ಟಿಲ್ವಲ್ಲ, ಅದೇ ನನಗೆ ಇರೋ ನಿಜ್ವಾದ privilege ಅನ್ಸ್ತು.

2 Comments

  1. ಥ್ಯಾಂಕ್ ಯೂ ಶ್ರೀಕಾಂತ್ ನೀವು ಪುಸ್ತಕ ಓದಿದ್ದಕ್ಕೆ… ಅದರ ಬಗ್ಗೆ ಪ್ರೀತಿಯಿಂದ ಬರೆದಿದ್ದಕ್ಕೆ ❤❤

    ಹಿಟ್ಲರ್ ಇಂದ, ಜರ್ಮನ್ಸ್ ಇಂದ Jews ಅನುಭವಿಸಿದ ಕಷ್ಟಗಳನ್ನ ಊಹಿಸ್ಕೊಂಡಾಗ ನಾನು ಪ್ರತಿ ಕ್ಷಣ ಸಾವಿನ ಬಗ್ಗೆ ಯೋಚ್ನೆ ಮಾಡೋಷ್ಟಿಲ್ವಲ್ಲ, ಅದೇ ನನಗೆ ಇರೋ ನಿಜ್ವಾದ privilege ಅನ್ಸ್ತು…
    ಅಲ್ವಾ
    ಬದುಕಿನಲ್ಲಿ ಮತ್ತಿಷ್ಟು ಕಾರುಣ್ಯ ಇರಬೇಕು ಅನ್ನಿಸಿತು ನನಗೂ ಇದನ್ನೆಲ್ಲ ನೋಡಿದ ನಂತರ…

    ಥ್ಯಾಂಕ್ಸ್ ಮತ್ತೊಮ್ಮೆ ??

  2. Dear SKC
    ನಿಮ್ಮ ಅಭಿಪ್ರಾಯ ಪುಸ್ಕವನ್ನು ಓದಬೇಕು ಅಂತಾ tempt ಮಾಡತ್ತೆ.
    ಮತಗಯೊಂದು ಪುಸ್ತಕ ಪರಿಚಯಿಸಿದ್ದಕ್ಕೆ ಧನ್ಯವಾದಗಳು

Comments are closed.